
ಬೆರ್ಮೆರ್
ತುಳುನಾಡ ಸೃಷ್ಟಿಕರ್ತನೆಂದೇ ನಂಬಲಾದ ತುಳುವರ ಆದಿಮೂಲದ ದೇವೆರಾಗಿರುವ ನಿರಾಕಾರ, ನಿರ್ಗುಣ, ಅನೂಹ್ಯ, ಅಗೋಚರ, ಅಗಾಧವಾದ ಹಾಗೂ ಸರ್ವಶಕ್ತವಾದ ಪ್ರಾಕೃತಿಕ ಶಕ್ತಿಯೇ ಬೆರ್ಮೆರ್ ಅಥವಾ ಬೆಮ್ಮೆರ್.
ಬೆರ್ಮರನ್ನು ತುಳುನಾಡಿನ ಪ್ರತಿ ಊರಿನಲ್ಲೂ ಬನಗಳಲ್ಲಿ, ಮಾಡಗಳಲ್ಲಿ, ಹೆಚ್ಚಿನ ದೇವಸ್ಥಾನಗಳಲ್ಲಿ (ಪ್ರಸ್ತುತ ಮಹಾಲಿಂಗೇಶ್ವರ, ಬ್ರಹ್ಮಲಿಂಗೇಶ್ವರ ಇತ್ಯಾದಿ ರೂಪದಲ್ಲಿ), ಕಂಬಳ ಗದ್ದೆಗಳಲ್ಲಿ, ಗರಡಿಗಳಲ್ಲಿ, ಆಲಡೆಗಳಲ್ಲಿ ನಾಗಬ್ರಹ್ಮ ಉರಿ ಬೆರ್ಮೆರ್ ಒರಿ ಬೆರ್ಮೆರ್ ಬೆಮ್ಮೆರ್, ಬೂತ ಬೆರ್ಮೆರ್ ಜಯವುಲ್ಲ ವಿವಿಧ ನಾಮಾಂಕಿತಗಳಲ್ಲಿ ಪರ್ವ ತಂಬಿಲ ನೇಮ ಬಲಿ ಉತ್ಸವದಂತಹ ಸೇವೆಗಳೊಂದಿಗೆ ಆರಾಧನೆ ನಡೆಯುತ್ತದೆ. ಅಂತಹ ತುಳುನಾಡ ಮೂಲಶಕ್ತಿಯಾದ ಬೆರ್ಮರ ಪ್ರಮುಖ ಆಲಯಗಳಲ್ಲಿ ಕುತ್ತಾರಿನ ಕ್ಷೇತ್ರವೂ ಒಂದು ಒಂದಾಗಿದೆ. ಇಲ್ಲಿ ಮೂಲತಃ ಬೆರ್ಮರಿಗೆ ಮಾಡ ಕಟ್ಟಿ ಅದರಲ್ಲಿ ಜೈನರ ಯಕ್ಷಬ್ರಹ್ಮನಿಗೆ ಹೋಲಿಸುವಂತಹ ಕುದುರೆಯೇರಿದ ಮಾನವ ರೂಪದಲ್ಲಿ ಆರಾಧನೆ ನಡೆಯುತ್ತಿತ್ತು.
ಇದಕ್ಕೆ ಪುಷ್ಠಿ ನೀಡುವಂತೆ ಕ್ರಿ.ಶಕ 1614-1626ರ ಆಸುಪಾಸಿನಲ್ಲಿ ಭಾರತಕ್ಕೆ ಆಗಮಿಸಿದ ಇಟಲಿ ಮೂಲದ Pietro Della Valle ಎಂಬವನು ಉಳ್ಳಾಲದ ಚೌಟರಸಿ ಅಬ್ಬಕ್ಕನ ಆಸ್ಥಾನಕ್ಕೆ ಭೇಟಿ ನೀಡಿ ಇಲ್ಲಿನ ಸೊಗಡನ್ನು ಕಾಣಲು ಹೊರಟಾಗ ಉಳ್ಳಾಲದ ಸಮೀಪದಲ್ಲೇ ರಾಣಿ ಅಬ್ಬಕ್ಕಳು ಕಟ್ಟಿಸಿದಂತಹ brimore ಎಂದು ಸಂಬೋಧಿಸಲಾದ ಬೆರ್ಮರ ಮಾಡದ ಒಳಗೆ ಹೋದಂತಹ ವಿಚಾರವನ್ನು ಅವನ ಕೃತಿಯಲ್ಲಿ ದಾಖಲಿಸಿರುತ್ತಾನೆ. ಈ ಕುರಿತಾಗಿ ಅವಲೋಕಿಸಿದಾಗ ಉಳ್ಳಾಲದ ಸಮೀಪ ಬೆರ್ಮರ ಮಾಡ ಅಥವಾ ಆಲಯ ಇದ್ದುದೇ ಆದರೆ ಅದು ಕುತ್ತಾರಿನಲ್ಲಿ ಹೊರತಾಗಿ ಬೇರೆಲ್ಲೂ ಕಾಣಸಿಗುವುದಿಲ್ಲ. ಆದ್ದರಿಂದ 16 ನೇ ಶತಮಾನದಲ್ಲಿ ಇಲ್ಲಿ ಬೆರ್ಮರ ಮಾಡ ಇತ್ತು ಈ ಮೂಲಕ ಸಾಬೀತು ಮಾಡಬಹುದು. ಆ ಪ್ರಕಾರ ಕುತ್ತಾರಿನ ಶ್ರೀಕ್ಷೇತ್ರದಲ್ಲಿ ಸಿರಿ ಕುಮಾರ ನಂದಿಗೋಣ ಲೆಕ್ಕೇಸಿರಿಯೊಡನೆ ಪ್ರಧಾನ ಸಾನಿಧ್ಯವಾಗಿ ಮಾಡದಲ್ಲಿ ಶ್ರೀ ಬೆರ್ಮರು ನೆಲೆಸಿರುತ್ತಾರೆ.
ಬೆರ್ಮೆರ್ ದೇವರು ಸಂತಾನ ಭಾಗ್ಯವನ್ನು ನೀಡುವ ಪಬ್ರಲ ಶಕ್ತಿಯಾದುದರಿಂದ ಸಂತಾನ ದೇರು ಬೆರ್ಮೆರ್ ದೇವರ ಬಳಿ ಪ್ರಾರ್ಥನೆ ಮಾಡುವುದು ಸೂಕ್ತವಾಗಿರುತ್ತದೆ. ಇದಕ್ಕೆ ನಿದರ್ಶನಗಳೂ ಕಂಡುಬರುತ್ತದೆ. ಹಲವಾರು
ಶ್ರೀ ರಕ್ತಶ್ವರಿ (ಲೆಕ್ಕೇಸಿರಿ) ಪ್ರಧಾನ ಸಾನಿಧ್ಯ: ಶ್ರೀ ರಕ್ತಶ್ವರಿ (ಲೆಕ್ಕೇಸಿರಿ) ದೈವ ತುಳುವರಲ್ಲಿ ಆದಿಮೂಲದ ದೈವವೆಂದೇ ಗುರುತಿಸಲಾದ ಭೂಮಿ ತೂಕಂದ ಕನ್ಯಾವು ಸತ್ಯ ಎಂಬ ಪುರಾಪು ಪಡೆದ ಕಾರಣೀಕ ಶಕ್ತಿಯೇ ಲೆಕ್ಕೇಸಿರಿ ಅಥವಾ ರಕೇಶ್ವರಿ ದೈವ. ಈ ಶಕ್ತಿಯ ಮೂಲದ ಕುರಿತಾಗಿ ತುಳುನಾಡಿನಲ್ಲಿ ಪ್ರಚಲಿತವಿರುವ ನಂಬಿಕೆ ಏನೆಂದರೆ ಎಲ್ಲಿ ಪ್ರಾಕೃತಿಕ ಸೊಗಡುಳ್ಳ ಜಲಸಂಪತ್ತಿನಿಂದ ಕಂಗೊಳಿಸುವ ಅಥವಾ ಬೆಳೆ ಕೃಷಿಗಳು ತುಂಬಿತುಳುಕುತ್ತಿದೆಯೋ ಅಲ್ಲಿ ಈ ದೈವವು ತಾನಾಗಿಯೇ ಉದಿಸಿ ಬರುವಳು ಎಂದು ನಂಬಲಾಗುತ್ತದೆ. ಒಂದೆಡೆಯಲ್ಲಿ ಶಕ್ತಿಯು ಆದಿಶಕ್ತಿಯ ಮಾತೃಸ್ವರೂಪಿ…
ಏಳ್ವೆರ್ ಸಿರಿಗಳು ಒರಿ ಕುಮಾರ ನಂದಿಗೋಣ ಬೆರ್ಮಮೂಲದಲ್ಲಿ ಹುಟ್ಟಿ ಬಂದು ಮಾನವ ರೂಪದಲ್ಲಿ ತನ್ನ ಕಲೆಕಾರ್ಣಿಕವನ್ನು ತೋರ್ಪಡಿಸಿ ಸತ್ಯ ಮಹಾತ್ಮರಾಗಿ ಮೆರೆದ ಶಕ್ತಿಗಳೇ ಸಿರಿಗಳು ಮತ್ತು ಕುಮಾರ. ಮಾಯಲೋಕದಲ್ಲಿ ಏಳೆರ್ ಅಕ್ಕ ತಂಗಿಯರಾಗಿ ಜನಿಸಿದ ಶಕ್ತಿಗಳು ಬೆರ್ಮರ ಅಪ್ಪಣೆಯಂತೆ ಭೂಲೋಕದಲ್ಲಿ ಮಾನವರೂಪದಲ್ಲಿ ಹುಟ್ಟುತ್ತಾರೆ. ಅಂತೆಯೇ ಮೊದಲಾಗಿ ಅಕ್ಕೆರಸು ಸಿರಿ, ದಾರು, ಸಾಮು, ಸೊನ್ನೆ, ಗಿಂಡೆ, ಅಬ್ಬಗ ಮತ್ತು ದಾರಗ ಎಂಬ ನಾಮದಲ್ಲಿ ಜನಿಸಿ, ಬೆರ್ಮರ ಸಾಕ್ಷಾತ್ ಅಂಶವಾದ ಕುಮಾರನು ಅಕ್ಕೆರಸು ಸಿರಿಯ ಮಗನಾಗಿ ಕುಮಾರ ಕೋಟಿ ಪೂಂಜ ಎಂಬ ನಾಮದಲ್ಲಿ ಸಿರಿಗಳೊಡನೆ ತಾನೂ ಮಾಯ ಸಂದು,ಕಾರಣೀಕ ಶಕ್ತಿಗಳಾಗಿ ಜಯವುಲ್ಲ…
ಕೊರಗಜ್ಜ ಮತ್ತು ಗುಳಿಗಜ್ಜ ದೈವಗಳು ತುಳುನಾಡಿನ ಅತ್ಯಂತ ಕಾರಣೀಕ ಶಕ್ತಿ ಭಕ್ತರಿಂದ ಪ್ರೀತಿ ಗೌರವದಿಂದ ಅಜ್ಜನೆಂದೇ ಕರೆಯಲ್ಪಡುವ ಕೊರಗತನಿಯ ದೈವವೇ ಇಲ್ಲಿನ ಅಧಿಪತಿಯಾಗಿ ನೆಲೆಸಿರುತ್ತಾರೆ. ಪಾರ್ದನದ ಪ್ರಕಾರ ಕೊರಗರ ಕೊಪ್ಪದಲ್ಲಿ ತನಿಯ ಎಂಬ ಹೆಸರಿನಲ್ಲಿ ಆಚು ಮೈರೆ ಪಣಂಬೂರ ಓಡಿ (ಒರವನ ಓಡಿಜನಿಸಿ) ದಂಪತಿಗೆ ಜನಿಸಿ, ಕಿರುವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಕೊನೆಗೆ ತಂದೆಯೂ ಕೊನೆಯುಸಿರೆಳೆದಾಗ, ಕೊರಗರ ಸಂತಾನ ಅಳಿಯುತ್ತ ಹೋದಾಗ ಕೊಪ್ಪವನ್ನು ತೊರೆದು, ಅನಾಥ ಸ್ಥಿತಿಯಲ್ಲಿ ಕುಳಿತಿದ್ದಾಗ ಎಣ್ಣುರ ಬರ್ಕೆಯ ಮೈರಕ್ಕೆ ಬೈದೆತಿಯನ್ನು ಕಂಡು ಅವನನ್ನು ವಿಚಾರಿಸಿ, ತಮ್ಮ ಮನೆಯಲ್ಲಿ ಆಶ್ರಯ ನೀಡಲು…