Skip to content Skip to footer

Eluver Sirigalu

ಏಳ್ವೆರ್‌ ಸಿರಿಗಳು ಒರಿ ಕುಮಾರ ನಂದಿಗೋಣ

ಬೆರ್ಮಮೂಲದಲ್ಲಿ ಹುಟ್ಟಿ ಬಂದು ಮಾನವ ರೂಪದಲ್ಲಿ ತನ್ನ ಕಲೆಕಾರ್ಣಿಕವನ್ನು ತೋರ್ಪಡಿಸಿ ಸತ್ಯ ಮಹಾತ್ಮರಾಗಿ ಮೆರೆದ ಶಕ್ತಿಗಳೇ ಸಿರಿಗಳು ಮತ್ತು ಕುಮಾರ. ಮಾಯಲೋಕದಲ್ಲಿ ಏಳೆ‌ರ್ ಅಕ್ಕ ತಂಗಿಯರಾಗಿ ಜನಿಸಿದ ಶಕ್ತಿಗಳು ಬೆರ್ಮರ ಅಪ್ಪಣೆಯಂತೆ ಭೂಲೋಕದಲ್ಲಿ ಮಾನವರೂಪದಲ್ಲಿ ಹುಟ್ಟುತ್ತಾರೆ. ಅಂತೆಯೇ ಮೊದಲಾಗಿ ಅಕ್ಕೆರಸು ಸಿರಿ, ದಾರು, ಸಾಮು, ಸೊನ್ನೆ, ಗಿಂಡೆ, ಅಬ್ಬಗ ಮತ್ತು ದಾರಗ ಎಂಬ ನಾಮದಲ್ಲಿ ಜನಿಸಿ, ಬೆರ್ಮರ ಸಾಕ್ಷಾತ್ ಅಂಶವಾದ ಕುಮಾರನು ಅಕ್ಕೆರಸು ಸಿರಿಯ ಮಗನಾಗಿ ಕುಮಾರ ಕೋಟಿ ಪೂಂಜ ಎಂಬ ನಾಮದಲ್ಲಿ ಸಿರಿಗಳೊಡನೆ ತಾನೂ ಮಾಯ ಸಂದು,ಕಾರಣೀಕ ಶಕ್ತಿಗಳಾಗಿ ಜಯವುಲ್ಲ ಬೆರ್ಮರ ಎಡ ಬಲಗಳಲ್ಲಿ ನಂದಿಗೋಣನೊಡನೆ ನೆಲೆಸುತ್ತಾರೆ. ಅಂತಹ ಸಿರಿಕುಮಾರರು ಕುತ್ತಾರಿನಲ್ಲಿ ಬೆರ್ಮರ ಅಡಿಯಂಗಣದಲ್ಲಿ ಸ್ಥಾನ ಪಡೆದು ಮೆರೆಯುತ್ತಾರೆ. ಕೊರಗತನಿಯ ದೈವದ ಸಂದಿಯಲ್ಲಿ ತಿಳಿದುಬಂದಂತೆ. ಸಿರಿಗಳನ್ನು ರಕ್ಷಣೆ ನೀಡಲು ತಾನು ನೆಲೆಸಿದೆ ಎಂಬ ಉಲ್ಲೇಖವನ್ನೂ ನಾವು ಕಾಣಬಹುದಾಗಿದೆ.
ಸಿರಿಗಳು ಮತ್ತು ಕುಮಾರರು ಅವರ ಭವಿಷ್ಯದ ಕಾಲವನ್ನು ಕುತ್ತಾರಿನ ಬೆರ್ಮೆರ್ ದೇವರ ಮೂಲ ಮಣ್ಣಿನಲ್ಲಿ ಕಳೆಯುವ ಉದ್ದೇಶದಿಂದ ಮಣ್ಣಿನಲ್ಲಿಯೇ ಬಂದು ನೆಲೆಸುತ್ತಾರೆ ಹಾಗೂ ಆರಾದಿಸಲ್ಪಡುತ್ತಾರೆ.
ಸಿರಿಗಳು ಮಹಿಳೆಯರಿಗೆ ಧೈರ್ಯ ಹಾಗೂ ಶಕ್ತಿ ತುಂಬುವ ಪ್ರಮುಖ ಶಕ್ತಿಗಳಾಗಿದ್ದು ಕಂಕಣಭಾಗ್ಯವನ್ನು ಒದಗಿಸುವ ಶಕ್ತಿಗಳಾಗಿವೆ.

All Rights Reserved.